ರಾಜ್ಯೋತ್ಸವ ಮತ್ತು ದೀಪಾವಳಿ ವಿಶೇಷ : ನುಡಿ ಕನ್ನಡ, ನಡೆ ಕನ್ನಡ !!

12066028_1698267833739817_6263970816267116902_n

ನವೆಂಬರ್ ತಿಂಗಳ ಹೊಸ್ತಿಲಲ್ಲಿ ಎಂದಿನಂತೆ ಮತ್ತೊಂದು ಸಂಭ್ರಮ ಮತ್ತು ಸಡಗರಕ್ಕೆ ಕರ್ನಾಟಕ ಸಜ್ಜಾಗುತ್ತಿದೆ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಇತಿಹಾಸವನ್ನು ಮೆಲುಕು ಹಾಕುತ್ತಾ ಸಂಭ್ರಮದ ಆಚರಣೆಗಳು ಮತ್ತು ಕನ್ನಡವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆಗಳು ಈ ತಿಂಗಳಿನಲ್ಲಿ ಹೆಚ್ಚಾಗಿ ನಡೆಯುತ್ತವೆ.

ಕನ್ನಡದ ಸುತ್ತ ನಡೆಯುವ ಚರ್ಚೆಗಳನ್ನು ಸಾಹಿತ್ಯ-ಕಲೆ-ಮನೋರಂಜನೆ-ಅಭಿಮಾನ ಎಂಬ ಕೆಲವೇ ಕೆಲವು ವಲಯಗಳಿಗೆ ಸೀಮಿತಗೊಳಿಸದೇ ಮುಂದಿನ ಹಲವಾರು ಸವಾಲುಗಳಿಗೆ ಕನ್ನಡವನ್ನು ಸಜ್ಜುಗೊಳಿಸುವ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಯಾಕೆಂದರೆ ಜಾಗತೀಕರಣದ ಈ ಹೊತ್ತಿನಲ್ಲಿ ನುಡಿಗಳು ಎದುರಿಸುತ್ತಿರುವ ಸವಾಲುಗಳು ಹಿಂದೆಲ್ಲಾ ಎದುರಾಗಿದ್ದ ಸವಾಲುಗಳಿಗಿಂತ ಬೇರೆಯೇ ತೆರನದ್ದಾಗಿವೆ.

ಈ ನಿಟ್ಟಿನಲ್ಲಿ, ಇಂತದೇ ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಂತಿರುವ ಮುಂದುವರೆದ ನುಡಿಸಮುದಾಯಗಳು ಕೈಗೊಂಡಂತಹ ಕೆಲಸಗಳೇನು ಎಂಬ ಬಗ್ಗೆಯೂ ಕನ್ನಡ ಸಮಾಜದಲ್ಲಿ ಚರ್ಚೆ ನಡೆಯಬೇಕಿದೆ.

kanada

‘ನ ಕಾರ್ತಿಕ ಸಮೋ ಮಾಸೋ’ ಎಂಬುದೊಂದು ಶ್ಲೋಕಪಾದ. ಕಾರ್ತಿಕಕ್ಕೆ ಸಮನಾದ ಮಾಸ ಮತ್ತೊಂದಿಲ್ಲ ಎಂಬುದು ತಾತ್ಪರ್ಯ. ‘ಆಶ್ವೀಜ-ಕಾರ್ತಿಕ ಶರದೃತು’ ಎಂದು ನಾವೆಲ್ಲ ಚಿಕ್ಕವರಾಗಿದ್ದಾಗ ಮಗ್ಗಿ ಪುಸ್ತಕ ಓದಿ ಉರು ಹೊಡೆದದ್ದುಂಟು. ಷಡೃತುಗಳಲ್ಲಿ ಮೊದಲನೆಯದಾದ ‘ವಸಂತ’ವನ್ನು ‘ಋತು ರಾಜ’ ಎಂದು ವರ್ಣಿಸುವುದಿದೆ. ಆದರೆ ಭಾರತವಾಸಿಗಳಾದ ನಮಗೆ ವಾಸ್ತವದಲ್ಲಿ ಶರದೃತುವೇ ಅತ್ಯಂತ ಸುಖಕರವೂ ಸುಂದರತರವೂ ಆಗಿರುವ ಕಾಲ. ವರ್ಷ ಋತುವಿನ ಮಳೆಯ ಅಬ್ಬರ ತಗ್ಗಿ, ಆಕಾಶವೆಲ್ಲ ನಿರಭ್ರನೀಲವಾಗಿ, ಕೆರೆತೊರೆಗಳಲ್ಲಿ ತಿಳಿನೀರು ತುಂಬಿ, ಹೊಲಗದ್ದೆಗಳಲ್ಲಿ ಹೊಂಬಣ್ಣದ ಪಯಿರುಗಳು ತೊನೆದಾಡುವ ಸೃಷ್ಟಿ ಸೌಂದರ್ಯವು ಮನಸ್ಸನ್ನು ಮುತ್ತಿ ಮೋಹಿಸುವ ಕಾಲವೆಂದರೆ ಶರದೃತು ಸರಿ.

ಇಂತಹ ಸುಂದರ ಶರದೃತುವಿನ ಒಂದು ವಿಶಿಷ್ಟ ಪರ್ವವೆಂದರೆ ದೀಪಾವಳಿ ಹೌದು, ಹೆಸರೇ ಹೇಳುವಂತೆ ಸಾಲು ದೀಪಗಳ, ದೀಪಮಾಲೆಗಳ ಹಬ್ಬ, ಮೂರು ದಿನಗಳ ಕಾಲ ಮನೆಯಹೊಸ್ತಿಲು, ಕಿಟಕಿಯ ದಳಿ, ಅಂಗಳದ ಅಗಲ, ಪಾಗಾರದ ಮೇಲೆ ಎಲ್ಲೆಲ್ಲೂ ಹಣತೆಗಳ ಹೊಂಬಳಕಿನ ಕುಡಿಯಾಟ. ನೆಲ ಸಾಲದೆಂದು ಬಗೆಬಗೆಯ ಗೂಡುದೀಪಗಳನ್ನು ಕಟ್ಟಿ ಮುಗಿಲಿಗೂ ಏರಿಸುವ ಉತ್ಸಾಹ!

ಮನೆ ಮನೆಗಳ, ಊರು ಕೇರಿಗಳ ಕಿರಿಯರೆಲ್ಲ ಒಂದಾಗಿ, ಅವರೊಂದಿಗೆ ಹಿರಿಯರೂ ಸೇರಿ ಸದ್ದುಗದ್ದಲಗಳ ಪಟಾಕಿಯನ್ನು ಸಿಡಿಸಿ, ಬಣ್ಣದ ಬೆಳಕುಗಳ ಬಾಣ ಬಿರುಸುಗಳನ್ನು ಉರಿಸಿ ಎಲ್ಲರೂ ಹಿಗ್ಗುವ ಹಬ್ಬ ದೀಪಾವಳಿ. ಜನಸಾಮಾನ್ಯಕ್ಕೆ ಹಬ್ಬ (‘ಪರ್ಬ’)ವೆಂದರೂ ದೀಪಾವಳಿಯೆಂದರೂ ಏಕಾರ್ಥಕ. ‘ಹಬ್ಬದ ದಿನವೂ ಹಳೆಯ ಗಂಡೇ’ ಎಂಬುದೊಂದು ಗಾದೆ ಮಾತು. ಹಬ್ಬದಂದು ಎಲ್ಲರೂ ಹೊಸಬರಾಗಬೇಕೆಂಬುದು ಅವರ ಅರ್ಥ. ಎಣ್ಣೆ ಸ್ನಾನ, ಹೊಸ ಬಟ್ಟೆ, ಸಿಹಿ ತಿಂಡಿ, ಸವಿಮಾತು ಎಂದರೆ ದೀಪಾವಳಿ.

ಷಡೃತುಗಳು ಸಾರ-ಸ್ವಾರಸ್ಯಗಳನ್ನು ಬಾಯಾರೆ ಬಣ್ಣಿಸುವ ಕವಿಜನರು ದೀಪಾವಳಿಯ ವೈಶಿಷ್ಟ್ಯಕ್ಕೆ ಮೂಕವಾಗಿರಲು ಸಾಧ್ಯವೇ? ಹಿಗ್ಗಿನ ಹಬ್ಬವಾಗಿರುವ ದೀವಳಿಗೆಯ ಬಗೆಗೆ ನಮ್ಮ ಕವಿವಿಭೂತಿಗಳು ಬಗೆ ಬಗೆಯ ಕಬ್ಬಗಳನ್ನು ಹೊಸದು ಹಾಡಿದ್ದಾರೆ. ‘ಅಪ್ಪನ ಜೇಬಿನ ದುಡ್ಡುಗಳೆಲ್ಲವು ಚಟಪಟಗುಟ್ಟುತ ಸಿಡಿಯುವುವು’ ಎಂಬಂತಹ ಸರಳ ಸುಂದರ ಶಿಶು ಗೀತಗಳನ್ನು ಬರೆದವರಿದ್ದಾರೆ. ಆ ಹಬ್ಬದ ಹೊರಗೇನು, ಒಳಗೇನು ಎಂಬುದನ್ನು ತೆರೆದು ಒರೆದವರಿದ್ದಾರೆ.

ಡೈಲಿ ಹಂಟ್ ಪರಿವಾರದಿಂದ ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s