ಸೃಜನಶೀಲ ಮನಸ್ಸು ಮತ್ತು ಅದರ ಭಾವನೆಗಳ ಕುರಿತು…

ನಾವು ಮನುಷ್ಯರು, ಸಾಮಾನ್ಯವಾಗಿ ನಮ್ಮ ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಇಡೀ ಭೂ-ಮಂಡಲದ ಸಕಲ ಜೀವ-ಚರಾಚರಗಳಲ್ಲಿ ಮನುಷ್ಯ ಅತ್ಯಂತ ಬುದ್ದಿವಂತ ಜೀವಿ. ಕೇವಲ ಬುದ್ಧಿವಂತಿಕೆಯ ವಿಷಯದಲ್ಲಿ ಮಾತ್ರವಲ್ಲ, ಮಾನಸಿಕವಾಗಿಯೂ ಸಮರ್ಥ ಕೂಡ.

ಮನುಷ್ಯನ ಮನಸ್ಸು ಅವನ ಭಾವನೆಗಳ ಕೈಗನ್ನಡಿ ಇದ್ದ ಹಾಗೆ. ತನ್ನ ಮನದ ಭಾವನೆಗಳಿಗೆ ಸ್ಪಂದಿಸುತ್ತಾ ಇತರರೊಂದಿಗೆ ಬೆರೆಯುತ್ತಾ  ಜೀವನವದಲ್ಲಿ  ಬೇಕು-ಬೇಡಗಳ ಬಗ್ಗೆ ಒಲವು ತೋರುತ್ತ ತನ್ನ ಜೀವನವನ್ನು ನಡೆಸುತ್ತಾ ಬಂದಿದಾನೆ.

ವೇದ-ಉಪನಿಷತ್ತು ಗಳಲ್ಲಿ  ಹೇಳಿರುವ ಹಾಗೆ ಪಂಚ ತನ್ಮಾತ್ರೆ ಗಳ, ಪಂಚ ಭೂತಗಳ, ಪಂಚ ಪ್ರಾಣಗಳ, ಪಂಚೇಂದ್ರಿಯಗಳ ವ್ಯಷ್ಠಿಯೇ ಮನುಷ್ಯ. ಇವುಗಳನ್ನು ತನ್ನೊಳಗೆ ಅಡಗಿಸಿ ಬೆಳದು ಬಂದ ಅಂಶವೇ ಮಾನವನ ಮನಸ್ಸು .

ಮನುಷ್ಯನ ಮನಸ್ಸು ಕೋಮಲವಾದ ಹೂವಿನ ಹಾಗೆ. ಅದು ನಗುವಾಗ ಅರಳುವುದು,ನೊಂದಾಗ ಮುದುಡಿ ಬಾಡಿ ಹೋಗುವುದು,ಕೆಲ ಸಂದರ್ಭದಲ್ಲಿ ಭಯದಿಂದ ತತ್ತರಿಸಿದರೆ, ಮತ್ತೆ ಕೆಲ ಸಮಯದಲ್ಲಿ ಹುಚ್ಚು ಹಿಡಿದ ಭಾವನೆ ಮೂಡುವುದು, ಏಕಾಂತವಾಗಿರಲು ಹಂಬಲಿಸುವುದು ಹೀಗೆ ನಾನಾ ರೀತಿಯ ಮನೋಭಾವನೆಗಳು  ಮನಸ್ಸಿನಲ್ಲಿ  ಮೂಡುವುದು ಸಹಜ .

ನಿಮ್ಮ ಮನಸ್ಸಿಗೆ  ಸ್ಪೂರ್ತಿ ನೀಡುವಂತಹ, ಅದರಲ್ಲೂ ಸದ್ಗುರು ಜಗ್ಗಿ ವಾಸುದೇವ ಸ್ವಾಮಿಜಿಗಳು ಬರೆದಿರುವ  ಸೊರಗಿದ ಮನಸ್ಸು ಒಂದು ಶತ್ರು; ಸದ್ಗುರುಗಳು ಬರೆದಿರುವ ”ಆಸೆಯೇ ಅನಂತ J.M.ಮೆಹ್ತಾರವರ  “ಸಂತೋಷಕ್ಕೆ ಎಪ್ಪತ್ತೈದು ದಾರಿ”,  ಯಂಡಮೂರಿ ವೀರೇಂದ್ರ ನಾಥ್  ರವರ ನಿಮ್ಮನ್ನು ನೀವು ಗೆಲ್ಲಬಲ್ಲಿರಿ”,”ಕಣಿವೆಯಿಂದ ಶಿಖರಕ್ಕೆ”,”ಯಶಸ್ಸಿನತ್ತ ಪಯಣ; ವಿಶ್ವೇಶ್ವರ್ ಭಟ್ ರ ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ”;  ಉಷಾ ವಾಸು&ಶಾಲಿನಿ ರಜನೀಶ್  ರವರು ಸೇರಿ ಬರೆದ  ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ”; ಗುಣಮುಖರವರ “ಚೈತನ್ಯದ ಚಿಲುಮೆ” ಮುಂತಾದ  ಚೇತೋಹಾರಿ – ಪ್ರೆರನಾತ್ಮಕ – ಸೃಜನಾತ್ಮಕ-ಭಾವನಾತ್ಮಕ ಜೊತೆಗೆ ಕಲಾತ್ಮಕ ಬದುಕನ್ನು ನಿರೂಪಿಸುವ,ಮನಸ್ಸಿನ ಭಾವನೆಗಳನ್ನು ಹಿಡಿದಿಟ್ಟು ಅದಕ್ಕೆ ಮತ್ತಷ್ಟು ರಂಗು ಭರಿಸುವ ನಿಟ್ಟಿನಲ್ಲಿ, ನಿಮಗಾಗಿ ಹಲವು ಪುಸ್ತಕಗಳನ್ನು ಹೊರ ತಂದಿದ್ದೇವೆ.

ಮನಸ್ಸಿನ ಭಾವನೆಗಳಿಗೆ ತಕ್ಕಂತೆ  . ಆಟ-ಪಾಠ, ಜಗಳ, ಸಂಕೋಚ, ಸಂತಸ,ಒಂಟಿತನ,ಬೇಸರ,ದುಃಖ, ಅಹಂ(ಅಹಂಕಾರ),ನೋವು, ಖಿನ್ನತೆ, ಒಲವು,ಆಕಾಂಕ್ಷೆ ,ಆಸೆ,ಬೇರೆಯುವಿಕೆ,ವಿರೋದ-ತಿರಸ್ಕಾರ, ಮೆಚ್ಚುವಿಕೆ, ದ್ವೇಷ,ಆತ್ಮೀಯತೆ, ಕುರಿತಾದ ಹಲವು ವರ್ಣಮಯ ಜಗತ್ತನ್ನೇ  ನಿಮ್ಮ ಮನಸ್ಸೆಂಬ ಮಾಯಾಲೋಕದ ಮುಂದೆ ನಾವು  ತೆರೆದಿಟ್ಟಿದ್ದೇವೆ. ಬನ್ನಿ ಓದಿ ಆನಂದಿಸಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s