ದೃಡ ಸಂಕಲ್ಪವೇ ಗೆಲುವಿನ ಹೊಸ್ತಿಲು

Blog-2ನಮ್ಮಲ್ಲಿ ಹಲವರಿಗೆ ಆತ್ಮ ಸ್ಥೈರ್ಯವಿದೆ, ಆತ್ಮವಿಶ್ವಾಸವಿದೆ, ಆತ್ಮ ಬಲವಿದೆ ಆದರೆ ಅದನ್ನು ಹೇಗೆ ರೂಪಿಸಿ, ಬೆಳೆಸಿ, ಉಪಯೋಗಿಸಿಕೊಳ್ಳಬೇಕು ಎಂಬುದು ತಿಳಿದಿಲ್ಲ. ಕಾರಣ ಅತಿಯಾದ ಮಾನಸಿಕ ಒತ್ತಡ, ತಮ್ಮ ಮೇಲೆ ಇರುವ ಕೀಳರಿಮೆ , ಅಜ್ಞಾನ, ದಿಗ್ಭ್ರಮೆ ಹಾಗು ಸಂದರ್ಭಗಳ ಒತ್ತಡ ನಿರ್ವಹಣೆಯ ಕುರಿತಾದ ಜ್ಞಾನವಿಲ್ಲದಿರುವುದು. ಇದು ಅತ್ಯಂತ  ಬೇಸರದ ಸಂಗತಿ.

ಹಿರಿಯರು ಹೇಳಿರುವ ಹಾಗೆ, ಬದುಕು ಅತಿ ದೊಡ್ಡ ಪುಸ್ತಕವಿದ್ದಂತೆ.  ಪ್ರತಿಯೊಂದು ಪುಟದಲ್ಲೂ ನಮಗೆ ಸೋಲು ಗೆಲುವಿನ ಕುರಿತಾದ ಒಂದೊಂದು ಕಥೆಯನ್ನು ಹಣೆದು ಅನುಭವದ ಪಾಠ ಹೇಳಿಕೊಡುತ್ತದೆ.

ಇದನ್ನು ಒಂದು ರೂಪದಲ್ಲಿ ಮಾನಸಿಕ ಕಾಯಿಲೆ ಎನ್ನಬಹುದು ಅಥವಾ ಮನೋವಿಕಸನ ಇಲ್ಲದ ವ್ಯಕ್ತಿತ್ವ ಎಂದು ಸಹ ಕರೆಯಬಹುದು. ಕೆಲ ಸಂದರ್ಭದಲ್ಲಿ ವ್ಯಕ್ತಿಗಳು ಕೆಲ ವಿಷಯಗಳನ್ನು ಅತೀ ಬೇಗ ಮನದಟ್ಟು ಮಾಡಿಕೊಂಡರೆ, ಉಳಿದವರು ತೀರ ಮಂದ ಗತಿಯಲ್ಲಿ ಸಾಗುತ್ತ ಅದನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಒಂದು ರೀತಿಯಲ್ಲಿ ಹೇಳಿದರೆ ಇದು ಆಮೆ ಮತ್ತು ಮೊಲದ ಕಥೆಯ ಹಾಗೆ.

ಗೆಲುವು ಎಲ್ಲರಿಗೂ ಏಕ ಕಾಲದಲ್ಲಿ ದೊರೆಯುವ ಸ್ವತ್ತಲ್ಲ , ಹಲವು ಪರಿಶ್ರಮಗಳ  ಫಲ. ಕೆಲವರಿಗೆ ಜಯದ ರುಚಿ  ಬೇಗ ಸಿಕ್ಕರೆ, ಉಳಿದವರಿಗೆ ಬಹು ತಡವಾಗಿ ಲಭಿಸುತ್ತದೆ. ಇಲ್ಲಿ ಯಾರೂ ಬುದ್ಧಿವಂತರಲ್ಲ, ಹಾಗೆ ದಡ್ದರೂ ಅಲ್ಲ.  ಇಲ್ಲಿ ಎಲ್ಲರೂ ಅವರವರ ಭಾವಕ್ಕೆ ಭಕುತಿಗೆ, ತಕ್ಕಂತ್ತೆ ಅವರವರ ಜೀವನ ಶೈಲಿಯನ್ನು  ನಿರೂಪಿಸಿಕೊಂಡು ಮುನ್ನಡೆಯ ಹಾದಿಯಲ್ಲಿ ಸಾಗುತ್ತಿರುವ ಸಹ ಪ್ರಯಾಣಿಕರು . ಆದರೂ  ಎಲ್ಲೋ ತಮ್ಮ ಗುರಿಯನ್ನು ಮರೆತು ದಿಕ್ಕು ತಪ್ಪಿ, ಮನೋವಿಕಾರಕ್ಕೆ ತುತ್ತಾದ ಬಡ ಜೀವಿಗಳೂ ನಮ್ಮಲ್ಲಿದ್ದಾರೆ .  ಜೀವನವೇ ಹಾಗೆ, ಎಷ್ಟು ಅರಿತರೂ ಅದು ಶೂನ್ಯಕ್ಕೆ ಸಮಾನ, ಎನ್ನುವುದನ್ನು ನಾವೆಲ್ಲರೂ ಅರಿತರೆ ಉತ್ತಮ.

ಅತ್ಮವಿಶ್ವಾಸವನ್ನು ಬಲಪಡಿಸಲು ಹಾಗು ಆತ್ಮ ವಿಕಸನಕ್ಕೆ ಸಂಬಂದಿಸಿದಂತೆ  ಯಂಡಮೂರಿ ವೀರೇಂದ್ರನಾಥ್ಯಶಸ್ಸಿನತ್ತ ಪಯಣ, ವ್ಯಕ್ತಿತ್ವ ವಿಕಾಸ ಮತ್ತು ಸಂವಹನ ಕೌಶಲಗಳು , ,ವಿಶ್ವೇಶ್ವರ್ ಭಟ್ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ? ,ವಿಶಾಲ್ ಗೋಯಲ್ ರ ಅಧುನಿಕ ನಿರ್ವಹಣೆಯ ಮಂತ್ರ , ಕಸ್ತೂರಿ ಯವರ ಭಾಷಣ ಕಲೆ ಹಾಗೂ ಭಾಷಣಗಳುಎಸ್ .ಬಸವಲಿಂಗಪ್ಪ ನವರ   ಶ್ರೇಷ್ಠ ಸಾಧಕರ ಸತ್ವ ನುಡಿಗಳು , ಜೆ.ಎಂ .ಕೃಷ್ಣಮೂರ್ತಿ ರವರ  ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ ,Dr. ಸಿ ಆರ್ ಚಂದ್ರಶೇಖರ್ಜ್ಞಾಪಕಶಕ್ತಿಯ ವೃದ್ಧಿ ಹೇಗೆ ? ,   ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ  ; ಹಾಗೂ ಇದರ  ಜೊತೆಗೆ  ಅತ್ಮವಿಕಸನದ ಬಗೆಗಿನ ಮತ್ತಷ್ಟು ಪುಸ್ತಕಗಳನ್ನು ನೀವು ಇಲ್ಲಿ  ಓದಬಹುದು.

“ಬಾಳಿನಲ್ಲಿ ಆತ್ಮ ವಿಕಸನ ಉತ್ತಮ, ಅದರಲ್ಲಿ ಸಂಯಮ, ದೃಡ ಸಂಕಲ್ಪ, ವಿಶ್ವಾಸ, ಛಲವಿದ್ದರೆ ಗೆಲುವು ಎಂದಿಗೂ ನಿಮ್ಮದೇ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s