ದೃಡ ಸಂಕಲ್ಪವೇ ಗೆಲುವಿನ ಹೊಸ್ತಿಲು

Blog-2ನಮ್ಮಲ್ಲಿ ಹಲವರಿಗೆ ಆತ್ಮ ಸ್ಥೈರ್ಯವಿದೆ, ಆತ್ಮವಿಶ್ವಾಸವಿದೆ, ಆತ್ಮ ಬಲವಿದೆ ಆದರೆ ಅದನ್ನು ಹೇಗೆ ರೂಪಿಸಿ, ಬೆಳೆಸಿ, ಉಪಯೋಗಿಸಿಕೊಳ್ಳಬೇಕು ಎಂಬುದು ತಿಳಿದಿಲ್ಲ. ಕಾರಣ ಅತಿಯಾದ ಮಾನಸಿಕ ಒತ್ತಡ, ತಮ್ಮ ಮೇಲೆ ಇರುವ ಕೀಳರಿಮೆ , ಅಜ್ಞಾನ, ದಿಗ್ಭ್ರಮೆ ಹಾಗು ಸಂದರ್ಭಗಳ ಒತ್ತಡ ನಿರ್ವಹಣೆಯ ಕುರಿತಾದ ಜ್ಞಾನವಿಲ್ಲದಿರುವುದು. ಇದು ಅತ್ಯಂತ  ಬೇಸರದ ಸಂಗತಿ.

ಹಿರಿಯರು ಹೇಳಿರುವ ಹಾಗೆ, ಬದುಕು ಅತಿ ದೊಡ್ಡ ಪುಸ್ತಕವಿದ್ದಂತೆ.  ಪ್ರತಿಯೊಂದು ಪುಟದಲ್ಲೂ ನಮಗೆ ಸೋಲು ಗೆಲುವಿನ ಕುರಿತಾದ ಒಂದೊಂದು ಕಥೆಯನ್ನು ಹಣೆದು ಅನುಭವದ ಪಾಠ ಹೇಳಿಕೊಡುತ್ತದೆ.

ಇದನ್ನು ಒಂದು ರೂಪದಲ್ಲಿ ಮಾನಸಿಕ ಕಾಯಿಲೆ ಎನ್ನಬಹುದು ಅಥವಾ ಮನೋವಿಕಸನ ಇಲ್ಲದ ವ್ಯಕ್ತಿತ್ವ ಎಂದು ಸಹ ಕರೆಯಬಹುದು. ಕೆಲ ಸಂದರ್ಭದಲ್ಲಿ ವ್ಯಕ್ತಿಗಳು ಕೆಲ ವಿಷಯಗಳನ್ನು ಅತೀ ಬೇಗ ಮನದಟ್ಟು ಮಾಡಿಕೊಂಡರೆ, ಉಳಿದವರು ತೀರ ಮಂದ ಗತಿಯಲ್ಲಿ ಸಾಗುತ್ತ ಅದನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಒಂದು ರೀತಿಯಲ್ಲಿ ಹೇಳಿದರೆ ಇದು ಆಮೆ ಮತ್ತು ಮೊಲದ ಕಥೆಯ ಹಾಗೆ.

ಗೆಲುವು ಎಲ್ಲರಿಗೂ ಏಕ ಕಾಲದಲ್ಲಿ ದೊರೆಯುವ ಸ್ವತ್ತಲ್ಲ , ಹಲವು ಪರಿಶ್ರಮಗಳ  ಫಲ. ಕೆಲವರಿಗೆ ಜಯದ ರುಚಿ  ಬೇಗ ಸಿಕ್ಕರೆ, ಉಳಿದವರಿಗೆ ಬಹು ತಡವಾಗಿ ಲಭಿಸುತ್ತದೆ. ಇಲ್ಲಿ ಯಾರೂ ಬುದ್ಧಿವಂತರಲ್ಲ, ಹಾಗೆ ದಡ್ದರೂ ಅಲ್ಲ.  ಇಲ್ಲಿ ಎಲ್ಲರೂ ಅವರವರ ಭಾವಕ್ಕೆ ಭಕುತಿಗೆ, ತಕ್ಕಂತ್ತೆ ಅವರವರ ಜೀವನ ಶೈಲಿಯನ್ನು  ನಿರೂಪಿಸಿಕೊಂಡು ಮುನ್ನಡೆಯ ಹಾದಿಯಲ್ಲಿ ಸಾಗುತ್ತಿರುವ ಸಹ ಪ್ರಯಾಣಿಕರು . ಆದರೂ  ಎಲ್ಲೋ ತಮ್ಮ ಗುರಿಯನ್ನು ಮರೆತು ದಿಕ್ಕು ತಪ್ಪಿ, ಮನೋವಿಕಾರಕ್ಕೆ ತುತ್ತಾದ ಬಡ ಜೀವಿಗಳೂ ನಮ್ಮಲ್ಲಿದ್ದಾರೆ .  ಜೀವನವೇ ಹಾಗೆ, ಎಷ್ಟು ಅರಿತರೂ ಅದು ಶೂನ್ಯಕ್ಕೆ ಸಮಾನ, ಎನ್ನುವುದನ್ನು ನಾವೆಲ್ಲರೂ ಅರಿತರೆ ಉತ್ತಮ.

ಅತ್ಮವಿಶ್ವಾಸವನ್ನು ಬಲಪಡಿಸಲು ಹಾಗು ಆತ್ಮ ವಿಕಸನಕ್ಕೆ ಸಂಬಂದಿಸಿದಂತೆ  ಯಂಡಮೂರಿ ವೀರೇಂದ್ರನಾಥ್ಯಶಸ್ಸಿನತ್ತ ಪಯಣ, ವ್ಯಕ್ತಿತ್ವ ವಿಕಾಸ ಮತ್ತು ಸಂವಹನ ಕೌಶಲಗಳು , ,ವಿಶ್ವೇಶ್ವರ್ ಭಟ್ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ? ,ವಿಶಾಲ್ ಗೋಯಲ್ ರ ಅಧುನಿಕ ನಿರ್ವಹಣೆಯ ಮಂತ್ರ , ಕಸ್ತೂರಿ ಯವರ ಭಾಷಣ ಕಲೆ ಹಾಗೂ ಭಾಷಣಗಳುಎಸ್ .ಬಸವಲಿಂಗಪ್ಪ ನವರ   ಶ್ರೇಷ್ಠ ಸಾಧಕರ ಸತ್ವ ನುಡಿಗಳು , ಜೆ.ಎಂ .ಕೃಷ್ಣಮೂರ್ತಿ ರವರ  ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ ,Dr. ಸಿ ಆರ್ ಚಂದ್ರಶೇಖರ್ಜ್ಞಾಪಕಶಕ್ತಿಯ ವೃದ್ಧಿ ಹೇಗೆ ? ,   ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ  ; ಹಾಗೂ ಇದರ  ಜೊತೆಗೆ  ಅತ್ಮವಿಕಸನದ ಬಗೆಗಿನ ಮತ್ತಷ್ಟು ಪುಸ್ತಕಗಳನ್ನು ನೀವು ಇಲ್ಲಿ  ಓದಬಹುದು.

“ಬಾಳಿನಲ್ಲಿ ಆತ್ಮ ವಿಕಸನ ಉತ್ತಮ, ಅದರಲ್ಲಿ ಸಂಯಮ, ದೃಡ ಸಂಕಲ್ಪ, ವಿಶ್ವಾಸ, ಛಲವಿದ್ದರೆ ಗೆಲುವು ಎಂದಿಗೂ ನಿಮ್ಮದೇ”

ಸೃಜನಶೀಲ ಮನಸ್ಸು ಮತ್ತು ಅದರ ಭಾವನೆಗಳ ಕುರಿತು…

ನಾವು ಮನುಷ್ಯರು, ಸಾಮಾನ್ಯವಾಗಿ ನಮ್ಮ ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಇಡೀ ಭೂ-ಮಂಡಲದ ಸಕಲ ಜೀವ-ಚರಾಚರಗಳಲ್ಲಿ ಮನುಷ್ಯ ಅತ್ಯಂತ ಬುದ್ದಿವಂತ ಜೀವಿ. ಕೇವಲ ಬುದ್ಧಿವಂತಿಕೆಯ ವಿಷಯದಲ್ಲಿ ಮಾತ್ರವಲ್ಲ, ಮಾನಸಿಕವಾಗಿಯೂ ಸಮರ್ಥ ಕೂಡ.

ಮನುಷ್ಯನ ಮನಸ್ಸು ಅವನ ಭಾವನೆಗಳ ಕೈಗನ್ನಡಿ ಇದ್ದ ಹಾಗೆ. ತನ್ನ ಮನದ ಭಾವನೆಗಳಿಗೆ ಸ್ಪಂದಿಸುತ್ತಾ ಇತರರೊಂದಿಗೆ ಬೆರೆಯುತ್ತಾ  ಜೀವನವದಲ್ಲಿ  ಬೇಕು-ಬೇಡಗಳ ಬಗ್ಗೆ ಒಲವು ತೋರುತ್ತ ತನ್ನ ಜೀವನವನ್ನು ನಡೆಸುತ್ತಾ ಬಂದಿದಾನೆ.

ವೇದ-ಉಪನಿಷತ್ತು ಗಳಲ್ಲಿ  ಹೇಳಿರುವ ಹಾಗೆ ಪಂಚ ತನ್ಮಾತ್ರೆ ಗಳ, ಪಂಚ ಭೂತಗಳ, ಪಂಚ ಪ್ರಾಣಗಳ, ಪಂಚೇಂದ್ರಿಯಗಳ ವ್ಯಷ್ಠಿಯೇ ಮನುಷ್ಯ. ಇವುಗಳನ್ನು ತನ್ನೊಳಗೆ ಅಡಗಿಸಿ ಬೆಳದು ಬಂದ ಅಂಶವೇ ಮಾನವನ ಮನಸ್ಸು .

ಮನುಷ್ಯನ ಮನಸ್ಸು ಕೋಮಲವಾದ ಹೂವಿನ ಹಾಗೆ. ಅದು ನಗುವಾಗ ಅರಳುವುದು,ನೊಂದಾಗ ಮುದುಡಿ ಬಾಡಿ ಹೋಗುವುದು,ಕೆಲ ಸಂದರ್ಭದಲ್ಲಿ ಭಯದಿಂದ ತತ್ತರಿಸಿದರೆ, ಮತ್ತೆ ಕೆಲ ಸಮಯದಲ್ಲಿ ಹುಚ್ಚು ಹಿಡಿದ ಭಾವನೆ ಮೂಡುವುದು, ಏಕಾಂತವಾಗಿರಲು ಹಂಬಲಿಸುವುದು ಹೀಗೆ ನಾನಾ ರೀತಿಯ ಮನೋಭಾವನೆಗಳು  ಮನಸ್ಸಿನಲ್ಲಿ  ಮೂಡುವುದು ಸಹಜ .

ನಿಮ್ಮ ಮನಸ್ಸಿಗೆ  ಸ್ಪೂರ್ತಿ ನೀಡುವಂತಹ, ಅದರಲ್ಲೂ ಸದ್ಗುರು ಜಗ್ಗಿ ವಾಸುದೇವ ಸ್ವಾಮಿಜಿಗಳು ಬರೆದಿರುವ  ಸೊರಗಿದ ಮನಸ್ಸು ಒಂದು ಶತ್ರು; ಸದ್ಗುರುಗಳು ಬರೆದಿರುವ ”ಆಸೆಯೇ ಅನಂತ J.M.ಮೆಹ್ತಾರವರ  “ಸಂತೋಷಕ್ಕೆ ಎಪ್ಪತ್ತೈದು ದಾರಿ”,  ಯಂಡಮೂರಿ ವೀರೇಂದ್ರ ನಾಥ್  ರವರ ನಿಮ್ಮನ್ನು ನೀವು ಗೆಲ್ಲಬಲ್ಲಿರಿ”,”ಕಣಿವೆಯಿಂದ ಶಿಖರಕ್ಕೆ”,”ಯಶಸ್ಸಿನತ್ತ ಪಯಣ; ವಿಶ್ವೇಶ್ವರ್ ಭಟ್ ರ ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ”;  ಉಷಾ ವಾಸು&ಶಾಲಿನಿ ರಜನೀಶ್  ರವರು ಸೇರಿ ಬರೆದ  ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ”; ಗುಣಮುಖರವರ “ಚೈತನ್ಯದ ಚಿಲುಮೆ” ಮುಂತಾದ  ಚೇತೋಹಾರಿ – ಪ್ರೆರನಾತ್ಮಕ – ಸೃಜನಾತ್ಮಕ-ಭಾವನಾತ್ಮಕ ಜೊತೆಗೆ ಕಲಾತ್ಮಕ ಬದುಕನ್ನು ನಿರೂಪಿಸುವ,ಮನಸ್ಸಿನ ಭಾವನೆಗಳನ್ನು ಹಿಡಿದಿಟ್ಟು ಅದಕ್ಕೆ ಮತ್ತಷ್ಟು ರಂಗು ಭರಿಸುವ ನಿಟ್ಟಿನಲ್ಲಿ, ನಿಮಗಾಗಿ ಹಲವು ಪುಸ್ತಕಗಳನ್ನು ಹೊರ ತಂದಿದ್ದೇವೆ.

ಮನಸ್ಸಿನ ಭಾವನೆಗಳಿಗೆ ತಕ್ಕಂತೆ  . ಆಟ-ಪಾಠ, ಜಗಳ, ಸಂಕೋಚ, ಸಂತಸ,ಒಂಟಿತನ,ಬೇಸರ,ದುಃಖ, ಅಹಂ(ಅಹಂಕಾರ),ನೋವು, ಖಿನ್ನತೆ, ಒಲವು,ಆಕಾಂಕ್ಷೆ ,ಆಸೆ,ಬೇರೆಯುವಿಕೆ,ವಿರೋದ-ತಿರಸ್ಕಾರ, ಮೆಚ್ಚುವಿಕೆ, ದ್ವೇಷ,ಆತ್ಮೀಯತೆ, ಕುರಿತಾದ ಹಲವು ವರ್ಣಮಯ ಜಗತ್ತನ್ನೇ  ನಿಮ್ಮ ಮನಸ್ಸೆಂಬ ಮಾಯಾಲೋಕದ ಮುಂದೆ ನಾವು  ತೆರೆದಿಟ್ಟಿದ್ದೇವೆ. ಬನ್ನಿ ಓದಿ ಆನಂದಿಸಿ.

ಪ್ರಿಯ ಓದುಗರೇ

ಡೈಲಿಹಂಟ್ ತಂಡದ ವತಿಯಿಂದ ಸರ್ವರಿಗೂ ಹೊಸ ವರ್ಷದ ಶುಭಾಶಯಗಳು !!

ಕನ್ನಡ  ಪುಸ್ತಕ  ಪ್ರಪಂಚದ  ನಮ್ಮ ಈ ಪಯಣ ನಿನ್ನೆ ಮೊನ್ನೆಯದಲ್ಲ , ಸತತ 2 ವರ್ಷಗಳಿಂದ .. ತೆರೆ ಮರೆಯಲ್ಲಿ ನಾವು ನಮ್ಮನ್ನು ಇ-ಬುಕ್ ಮಾಧ್ಯಮದಲ್ಲಿ ರೂಪಿಸಿಕೊಳ್ಳುತ್ತಾ  ಬಂದಿದ್ದೇವೆ.
ನಮ್ಮ ಭಾಷೆ ನಾಡು ನುಡಿಯ ಬಗೆಗಿನ ಗೌರವದೊಂದಿಗೆ,ಸಾಹಿತ್ಯ ಪರಂಪರೆಯಲ್ಲಿ ಕನ್ನಡದ ಅದ್ಭುತ ಖನಿಜಗಳನ್ನು , ಅವಿಸ್ಮರಣೀಯ ಕೃತಿಗಳನ್ನು ನಿಮ್ಮ ಬೆರಳ ತುತ್ತ ತುದಿಯತ್ತ ಹೊತ್ತು ತಂದಿದ್ದೇವೆ ಎಂದರೆ ತಪ್ಪಾಗಲಾರದು.

ಇಲ್ಲಿ ಕೇವಲ ಭಾಷಾವಾರು  ಅಥವಾ ಸಾಹಿತ್ಯಕ್ಕೆ ಮಾತ್ರ ಒತ್ತು ನೀಡದೆ, ಜನ ಜೀವನಕ್ಕೆ ಬೇಕಾಗುವ ಹಲವು ವಿಚಾರಗಳನ್ನು ಕೇಂದ್ರೀಕೃತ ಗೊಳಿಸಿ ಅದಕ್ಕೆ ಪಕ್ವವಾದ ವಿಚಾರಾತ್ಮಕ, ಕ್ರಿಯಾತ್ಮಕ ಮೆರುಗನ್ನು ನೀಡಿ ತಾಂತ್ರಿಕ ಕೌಶಲ್ಯತೆಗೆ ಕಿಂಚಿತ್ತು ಕುತ್ತು ಬಾರದಂತೆ ಕೃತಿಗಳನ್ನು ನಿಮಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ .

ಕೇವಲ ಕಥೆ ಕಾದಂಬರಿ ಕವನಗಳಿಗೆ ಒತ್ತು ಕೊಡದೆ ಸ್ವ-ಸಹಾಯ,ಅರೋಗ್ಯ, ದೈನಂದಿನ ಜೀವನಕ್ಕೆ ಸಂಬಂಧ ಪಟ್ಟ ಹಲವು ವಿಚಾರಗಳು, ಪ್ರಚಲಿತ ವಿದ್ಯಮಾನಗಳು, ವಿದ್ಯಾಭ್ಯಾಸ, ಆಧ್ಯಾತ್ಮಿಕತೆ, ಅಡುಗೆ,ಕ್ರಿಯಾಶೀಲ ಬರವಣಿಗೆ, ಮಕ್ಕಳ ಪುಸ್ತಕ, ಖ್ಯಾತ ನಾಮರ  ಜೀವನ ಚರಿತ್ರೆಗಳು,ಇತಿಹಾಸ-ವಿಜ್ಞಾನ ಲೋಕದಲ್ಲಿ ಚಿರವಾಗುಳಿದ ಹಲವು ಅಚ್ಚರಿಗಳು,ದಾಸರ ಪದಗಳು, ವಚನಗಳು  ..ಹೀಗೆ ಹತ್ತು ಹಲವು ಕ್ಷೇತ್ರಗಳ ಕುರಿತು 4000+ ಕ್ಕೂ ಹೆಚ್ಚಿನ ಕೃತಿಗಳನ್ನು ಒಳಗೊಂಡ ಸಾಹಿತ್ಯದ ರಸದೌತಣ ನಮ್ಮ ಡೈಲಿ ಹಂಟ್  APP ನಲ್ಲಿ ಕಾಣಬಹುದು.

ಬೀಚಿ,ವಿಶ್ವೇಶ್ವರ್ ಭಟ್, ನೇಮಿಚಂದ್ರ,ತಾರಾಸು, ಅಶ್ವಿನಿ, ಸೂರ್ಯದೇವರ  ರಾಮ್ ಮೋಹನ ರಾವ್ , ಯಂಡಮೂರಿ ವೀರೇಂದ್ರನಾಥ್,ಗೀತ .ಬಿ.ಯು. Dr.ಶಾಲಿನಿ ರಜನೀಶ್ ಹೀಗೆ ಹಲವು  ಗಣ್ಯ ಲೇಖಕರ ಅವಿಸ್ಮರಣೀಯ ಕೃತಿಗಳನ್ನು ತಮ್ಮ ಮೊಬೈಲ್ ನಲ್ಲಿ ನಮ್ಮ APP ಮೂಲಕ ಯಾವುದೇ ಅಡೆ ತಡೆ ಇಲ್ಲದೆ ಸರಳ ಮತ್ತು ಸರಾಗವಾಗಿ  ಓದಬಹುದು.

2015ನೇ  ಸಾಲಿನ  ಸರ್ವ  ಶ್ರೇಷ್ಠ  ರಚನೆಗಳು ನಮ್ಮ ಶೇಖರಣೆಯಲ್ಲಿ ಲಭ್ಯವಿದ್ದು , ಇಂದೇ  ನಿಮ್ಮ  ನೆಚ್ಚಿನ  ಕೃತಿಗಳನ್ನು ಖರೀದಿಸಿಕೊಳ್ಳಿ

ನಿಮ್ಮ ನೆಚ್ಚಿನ ಡೈಲಿ ಹಂಟ್ ಇದೀಗ ನಿಮ್ಮ ಟಿವಿ ತೆರೆಯ ಮೇಲೆ !

ಐದು ವರ್ಷಗಳ ಹಿಂದೆ ಭಾರತದ ಮೊಬೈಲ್ ಗ್ರಾಹಕರಿಗೆ ಸುದ್ದಿ ಸಮಾಚಾರಗಳನ್ನು ಅವರವರ ಭಾಷೆಗಳಲ್ಲೇ  ತಲುಪಿಸಬೇಕು ಎಂಬ ಮಹದಾಸೆ ಹೊತ್ತು ” ನ್ಯೂಸ್ ಹಂಟ್ ” ಆರಂಭಿಸಿದೆವು.

ಅಂದಿನಿಂದ ಇಂದಿನವರೆಗಿನ ಬೆಳವಣಿಗೆ ಅಮೋಘ. ಇಂದು ನಾವು ಹೆಮ್ಮೆಯಿಂದ ಹೇಳಬಲ್ಲೆವು ನಾವು ” ಭಾರತದ ಅತಿ ದೊಡ್ಡ ಈ – ಪುಸ್ತಕ ಮತ್ತು ಸುದ್ದಿ ಸಮಾಚಾರಗಳನ್ನು ಓದಲು ಬಳಸುವ ಅಪ್ಲಿಕೇಶನ್  ” ಎಂದು.

ಪ್ರಾದೇಶಿಕ ಭಾಷೆಗಳ ಪತ್ರಿಕೆಗಳಿಂದ ಶುರುವಾಗಿದ್ದು, ಇವತ್ತು ಈ -ಪುಸ್ತಕಗಳು, ನಿಯತಕಾಲಿಕೆಗಳು ಇನ್ನು ಮುಂತಾದ ಸೇರ್ಪಡೆಗಳೊಂದಿಗೆ ಹೊಸ ರೂಪದಲ್ಲಿ ಡೈಲಿ ಹಂಟ್  ಆಗಿ ನಿಮ್ಮ ಮುಂದೆ ಬಂದಿದೆ.

ನೀವು ಪ್ರೋತ್ಸಾಹಿಸಿ ಬೆಳೆಸಿದ ನ್ಯೂಸ್ ಹಂಟ್ ಅಪ್ಲಿಕೇಶನ್ , ಈಗ ಇನ್ನು ಸುಲಭ ಮತ್ತು ಸರಳ ವಿನ್ಯಾಸದೊಂದಿಗೆ “ಡೈಲಿ ಹಂಟ್ ” ರೂಪದಲ್ಲಿ ನಿಮ್ಮ ಮೊಬೈಲ್ ಪ್ರವೇಶಿಸಲಿದೆ.  ಇದ್ದನ್ನು ಬಳಸಿ ಮತ್ತು ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳು ನಮ್ಮ ಅಪ್ಲಿಕೇಶನನ್ನು ಮತ್ತಷ್ಟು ಉತ್ತಮಗೊಳಿಸಲು ಸಹಕಾರಿಯಾಗುತ್ತದೆ.

ಮುಂಚಿನ ಹಾಗೆ ಡೈಲಿ ಹಂಟ್ ಹನ್ನೆರಡಕ್ಕು ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ.

ಇಂದೇ ಡೌನ್ಲೋಡ್ ಮಾಡಿ.

ಡೈಲಿಹಂಟ್ ಅಪ್ಲಿಕೇಶನ್ ನಲ್ಲಿನ  ಹೊಸ ಬದಲಾವಣೆಗಳು :

೧) ಎಲ್ಲ ಮುಖ್ಯ ಪತ್ರಿಕೆಗಳ ಪ್ರಮುಖ ಸುದ್ದಿಗಳು ಒಂದೇ  ಪುಟದಲ್ಲಿ
೨) ಉತ್ತಮವಾದ ಚಿತ್ರಗಳು ( ಮೊಬೈಲ್ ಸ್ನೇಹಿ )
೩) ನಿಮ್ಮ ಇಷ್ಟದಂತೆ ಭಾಷೆ, ಪತ್ರಿಕೆ ಮತ್ತು ವಿಷಯಗಳನ್ನೂ ಆಯ್ಕೆ ಮಾಡಬಹುದು
೪) ಹೆಚ್ಚಿನ ವೇಗ ಮತ್ತು ಕಮ್ಮಿ ಇಂಟರ್ನೆಟ್ ಬಳಕೆ
೫) ಅಪ್ಲಿಕೇಶನ್ ಯಾವ ಭಾಷೆಯಲ್ಲಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು
೬) ನೀವು ಓದುವ ವಿಷಯ ಮತ್ತು ಆಯ್ಕೆಗಳನ್ನು ಆಧಾರಿಸಿ ನಿಮಗೆ ಇಷ್ಟವಾಗುವಂತಹ ಪುಸ್ತಕ, ಸುದ್ದಿ, ವೀಡಿಯೊಗಳನ್ನೂ ಸೂಚಿಸಲಾಗುತ್ತದೆ
೭) ನಿಮ್ಮ ಮೆಚ್ಚಿನ ವಿಷಯಗಳನ್ನು ಮತ್ತೊಮ್ಮೆ ಭವಿಷ್ಯದಲ್ಲಿ ಮತ್ತೆ ಓದಲು ಗುರುತಿಸಿಡಬಹುದು

೮) ನಿಮ್ಮ ನೆಚ್ಚಿನ ಪುಸ್ತಕದ ಆಯ್ದ ಅಧ್ಯಾಯಗಳನ್ನು ಮಾತ್ರ ಕೊಳ್ಳಲು ಅವಕಾಶವಿದೆ

ಡೈಲಿ ಹಂಟ್

 

ನೀವು ನ್ಯೂಸ್ ಹಂಟ್ ನಲ್ಲಿ ಮೆಚ್ಚಿದ ಎಲ್ಲ ಅಂಶಗಳು ನಮ್ಮ ಡೈಲಿ ಹಂಟ್ನಲ್ಲಿ ಲಭ್ಯವಿದೆ, ಅದರೊಂದಿಗೆ ನಮ್ಮ ಓದುಗರ ಸಲಹೆ ಸೂಚನೆಗಳ ಮೇರೆಗೆ ಕೆಲವೊಂದು ಅಂಶಗಳನ್ನು ಅಳವಡಿಸಲಾಗಿದೆ.

ನಮ್ಮ ಡೈಲಿ ಹಂಟ್ ಈಗ ಮತ್ತಷ್ಟು ಬಳಕೆದಾರ ಸ್ನೇಹಿಯಾಗಿದೆ.

ಹೊಸ ರೂಪದಲ್ಲಿ ಡೈಲಿ ಹಂಟ್ ಆಗಿ ಬದಲಾವಣೆಗೊಂಡಿರುವ ನಮ್ಮ ಅಪ್ಲಿಕೇಶನ್ ಬಗ್ಗೆ ಓದುಗರಿಗೆ ತಿಳಿಸಲು #AurKyaChalRahaHai ಎಂಬ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದೆ. ನೀವು ಮಾಡಬೇಕಾದದ್ದು ಇಷ್ಟೇ, ಮೇಲೆ ತೋರಿಸಿದ ವೀಡಿಯೊ ನೋಡಿ, ನಮ್ಮ ಫೇಸ್ಬುಕ್  ಮತ್ತು ಟ್ವಿಟರ್  ಪೇಜ್ನಲ್ಲಿ  ಕೇಳುವ ಸರಳ ಪ್ರಶ್ನೆಗೆ ಉತ್ತರಿಸಿ, ಬಹುಮಾನಗಳನ್ನು  ಗೆಲ್ಲಿರಿ.

ಫೇಸ್ಬುಕ್ – ಲೈಕ್

ಟ್ವಿಟರ್ – ಫಾಲೋ

ನಿಮ್ಮ ಪ್ರೋತ್ಸಾಹ ನಮಗೆ ಎಂದೆಂದಿಗೂ ಇರಲಿ.

ಇಂತಿ,
ಡೈಲಿ ಹಂಟ್